Kannada kathegalu|
ಕನ್ನಡ ಕಥೆಗಳು
|Kannada kathegalu Pdf download
ನಾಯಿಯ ತಪ್ಪು
ಒಬ್ಬ ನ್ಯಾಯಾಧೀಶರಿಗೆ ತೋಟದಲ್ಲಿ ಒಂದು ಕಾವಲು ನಾಯಿ ಇತ್ತು.ಒಮ್ಮೆ ಒಂದು ಮುಳ್ಳುಹಂದಿ ಅದರ ಬಳಿ ಬಂದು ' ಹಸಿವಾಗುತಿದೆ, ತಿನ್ನಲು ಏನಾದರೂ ಕೊಡು' ಎಂದು ಅಂಗಲಾಚಿ ಕೇಳಿತು.
ನಾಯಿ ನ್ಯಾಯಾಧೀಶರಿನ ಕಬ್ಬಿನ ತೋಟವನ್ನು ತೋರಿಸಿತು."ನಿನಗೆ ಬೇಕಾದಷ್ಟು ತಿನ್ನು.ಆದರೆ ಬೇರನ್ನು ಮಾತ್ರ ತಿನ್ನಬೇಡ. ಬೇರಿನಿಂದಲೆ ಕಬ್ಬಿನ ಗಿಡ ಬೆಳೆಯುತ್ತದೆ" ಎಂದಿತು.
ಮುಳ್ಳುಹಂದಿ ಗಮತ್ತಿನಲ್ಲಿ ಕಬ್ಬು ತಿಂದಿತು.ನಾಯಿ ಮಾತು ಮರೆತು,ಬೇರನ್ನೂ ತಿನ್ನತೊಡಗಿತು.
ಮರುದಿನ ನ್ಯಾಯಾಧೀಶ ತೋಟಕ್ಕೆ ಬಂದಾಗ ತೋಟ ಹಾಳುಬಿದ್ದಿರುವುದನು ನೋಡಿ ನಾಯಿಯನ್ನು ಗದರಿಸಿದ.
"ಇದು ಮುಳ್ಳು ಹಂದಿಯ ಕೆಲಸ.ನನ್ನ ತಪ್ಪಲ್ಲ" ಎಂದು ನಾಯಿ ಹೇಳಿತು.
ನ್ಯಾಯಾಧೀಶ ಮುಳ್ಳುಹಂದಿಯನ್ನು ಕರೆದುಕೊಂಡು ಬರಲು ಸೈನಿಕರಿಗೆ ಹೇಳಿದ.ಅವರು ಕಾಡಿನಲ್ಲಿ ದಿನಗಟ್ಟಲೆ ಹುಡುಕಿದರು.ಕೊನೆಗೊಂದು ದಿನ ಮುಳ್ಳುಹಂದಿ ಯನ್ನೂ ಪತ್ತೆ ಹಚ್ಚಿ ನ್ಯಾಯಾಧೀಶನ ಬಳಿಗೆ ಕರೆ ತಂದರು.ಅಷ್ಟರಲ್ಲಿ ಚಳಿಗಾಲ ಆರಂವಾಗಿತ್ತು.ನಾಯಿ ಚಳಿಯಲ್ಲಿ ನಡುಗುತ್ತಿತ್ತು.ನ್ಯಾಯಾಧೀಶ ವಿಚಾರಣೆ ಆರಂಬಿಸಿದ." ನನ್ನದೇನೂ ತಪ್ಪಿಲ್ಲ.ನಾಯಿಯದ್ದೇ ತಪ್ಪು.ನೋಡಿ, ಅದು ಹೇಗೆ ನಡುಗುತ್ತಿದೆ! ಅದೇ ತಪ್ಪಿತಸ್ಥ ಎನ್ನಲು ಬೇರೆ ಪುರಾವೆ ಬೇಕೆ?" ಎಂದಿತು ಮುಳ್ಳುಹಂದಿ."ನೀನು ಏನು ಹೇಳುತ್ತಿ ?" ನ್ಯಾಯಾಧೀಶ ನಾಯಿಯನ್ನು ಕೇಲಿದ.ಚಳಿಯಲ್ಲಿ ನಾಯಿಯ ಹಲ್ಲುಗಳು ಕಟಕಟ ಶಬ್ದ ಮಾಡಿದಾಹು.ಅದರ ಬಾಯಿ೦ದ ಮಾತೇ ಹೊರಡಲಿಲ್ಲ.ನಾಯಿಯೇ ತಪ್ಪಿತಸ್ಥ ಎಂದು ನ್ಯಾಯಾಧೀಶ ತೀರ್ಮಾನಿಸಿ ಅದನ್ನು ಒದ್ದು ಓಡಿಸಿದ.
0 Comments